ನಮ್ಮ ಕುರಿತು
ಸೇವಾ ದರ್ಶನ

ಟಿಡಬ್ಲ್ಯೂಆರ್360 ಬಳಕೆದಾರರಿಗೆ ಕ್ರಿಸ್ತನೊಂದಿಗಿನ ತಮ್ಮ ದಿನನಿತ್ಯದ ನಡೆಯಲ್ಲಿ ಬೆಳೆಯಲು ಸಹಾಯಕವಾಗುವ ಅತ್ಯಧಿಕ ಕ್ರೈಸ್ತ ಸಂಪನ್ಮೂಲಗಳನ್ನು ಡೌನ್‍ಲೋಡ್ ಮಾಡಿಕೊಳ್ಳಲು ಪ್ರವಹಿಸಲು ಹಾಗೂ ಓದಲು ಸಾಧವಾಗುವಂತೆ ಭಾಷೆಯ ಮತ್ತು ಸುಗಮತೆಯ ಅಡೆತಡೆಗಳನ್ನು ಮುರಿದುಹಾಕುತ್ತದೆ.
ಸೇವಾ ಗುರಿ
ಟಿಡಬ್ಲ್ಯೂಆರ್360ವು ಸಭೆಗೆ ಮಾಡತಕ್ಕ ಕೆಲಸದ ಬೆಂಬಲದಲ್ಲಿ ಯೇಸು ಕ್ರಿಸ್ತನ ಶ್ರೇಷ್ಠವಾದ ಆದೇಶವನ್ನು ನೆರವೇರಿಸುವಲ್ಲಿ ಟಿಡಬ್ಲ್ಯೂಆರ್360ಯ ಮುಂದುವರಿಯುವ ಮಾಧ್ಯಮ ಸೇವೆಯನ್ನು ವಿಸ್ತರಿಸುತ್ತಿರುವ ಹಾಗೆ ವೆಬ್ ಮತ್ತು ಮೊಬೈಲ್ ಆ್ಯಪ್ಲಿಕೇಷನ್‍ಗಳನ್ನು ಉಪಯೋಗಿಸುವವರ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸುತ್ತದೆ:
- ಯಾರಿಗಾದರೂ ಎಲ್ಲಿಯಾದರೂ ಮತ್ತು ಯಾವ ಸಮಯದಲ್ಲಾದರೂ ತಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್‍ಫೋನ್ ಮೂಲಕ ತಮ್ಮದೇ ಆದ ಆಡುಭಾಷೆಯಲ್ಲಿ ಕ್ರೈಸ್ತ ಅಂಕೀಯ (ಡಿಜಿಟಲ್) ಸಂಪನ್ಮೂಲಗಳ ವಿಶಾಲವಾದ ವ್ಯಾಪ್ತಿಯನ್ನು ಸುಲಭವಾದ ಹಾಗೂ ಸಮರ್ಥವಾದ ಪ್ರವೇಶಾಧಿಕಾರವನ್ನು ಪಡೆದುಕೊಳ್ಳಲು ಅವರನ್ನು ಶಕ್ತಗೊಳಿಸುವದು.
- ಕ್ರೈಸ್ತ ಸಂವಹನಕಾರರು ಇತರ ದೊಡ್ಡ ಮತ್ತು ಚಿಕ್ಕ ಸೇವೆಗಳ ಜೊತೆಗೆ ತಮ್ಮ ವಸ್ತುಗಳನ್ನು ಪ್ರಸಾರಮಾಡಲು ಸಮಗ್ರವಾದ ಬಹುಕ್ರಿಯಾತ್ಮಕ ಹೊರದಾರಿಯನ್ನು ಒದಗಿಸುವದು.
- ಸಮಯದ ಹಾಗೂ ಸ್ಥಳದ ನಿರ್ಬಂಧಗಳ ತೊಡಕಿಲ್ಲದೆ ಬಾನುಲಿ ಪ್ರಸಾರಗಳೊಂದಿಗಿನ ಹೊಂದಾಣಿಕೆಯಿಂದ ಟಿಡಬ್ಲ್ಯೂಆರ್360ನ ಕಾರ್ಯಕ್ರಮ ಬೃಹತ್ ಮತ್ತು ಬೆಳೆಯುತ್ತಿರುವ ಪೂರ್ಣಪಟ್ಟಿಯ ಲಭ್ಯತೆಯು ಅನುಕೂಲವಾಗುವಂತೆ ಕೇಂದ್ರ ನಿವೇಶನವಾಗಿ ನಿರ್ವಹಿಸುವದು.
ಟಿಡಬ್ಲ್ಯೂಆರ್ ಕುರಿತು
Speaking fluently in 200+ languages and dialects, TWR exists to reach the world for Jesus Christ. Our global media outreach engages millions in more than 160 countries with biblical truth. For more than 70 years, God has enabled TWR to help lead people from doubt to decision to discipleship.
ಅಂತರರಾಷ್ಟ್ರೀಯ ಪಾಲುದಾರರೊಂದಿಗೆ, ಸ್ಥಳಿಯ ಸಭೆಗಳೊಂದಿಗೆ ಮತ್ತು ಇತರ ಸೇವೆಗಳೊಂದಿಗೆ ಜೊತೆಗೂಡಿ ವಿಶ್ವದಾದ್ಯಂತ ಪ್ರತ್ಯೇಕ ವ್ಯಕ್ತಿಗಳಿಗೆ ಹಾಗೂ ಸಮುದಾಯಗಳಿಗೆ ನಿರೀಕ್ಷೆಯನ್ನು ಹರಡಿಸಲು ಸಂಬದ್ಧವಾದ ಕಾರ್ಯಕ್ರಮಗಳನ್ನೂ ಶಿಷ್ಯತ್ವ ಸಂಪನ್ಮೂಲಗಳನ್ನೂ ಮತ್ತು ಸಮರ್ಪಿತ ಕೆಲಸಗಾರರನ್ನೂ ಟಿಡಬ್ಲ್ಯೂಆರ್ ಒದಗಿಸುತ್ತದೆ. ಉಚ್ಛ-ಶಕ್ತಿಯ ಎಎಂ / ಎಮ್‍ಡಬ್ಲ್ಯೂ, ಎಸ್‍ಡಬ್ಲ್ಯೂ ಅಥವಾ ಎಫ್‍ಎಮ್ ರೇಡಿಯೋ ಉಪಯೋಗಿಸುವದಾಗಲಿ ಅಂತರ್ಜಾಲ ಬಳಕೆದಾರರಿಗೆ ಪ್ರವಹಿಸುವ ವಿಷಯವನ್ನು ಉಪಯೋಗಿಸುವದಾಗಲಿ ಅಥವಾ ಶ್ರೋತೃಗಳೊಂದಿಗೆ ಮುಖಾಮುಖಿಯಾಗಿ ಸಂಧಿಸುವದರಲ್ಲಾಗಲಿ ಟಿಡಬ್ಲ್ಯೂಆರ್ ಶಾಶ್ವತವಾದ ಆತ್ಮೀಕ ಹೆಜ್ಜೆಗುರುತನ್ನು ಬಿಡುತ್ತದೆ.