ಹಳೆಯ ಒಡಂಬಡಿಕೆಯಲ್ಲಿರುವ ಪ್ರೀತಿಯ ರೀತಿಯ ಕುರಿತು ಮಾತನಾಡೋಣ! ಈ ವೀಡಿಯೊದಲ್ಲಿ ನಾವು ಇಬ್ರಿಯ ಲೇಖಕರು "ಪ್ರೀತಿ" ಎಂಬ ಪದವನ್ನು ಬಳಸಿರುವ ವಿವಿಧ ರೀತಿಗಳ ಬಗ್ಗೆ ಮತ್ತು ಹೇಗೆ ದೇವರೇ ಮನುಷ್ಯರೆಲ್ಲರ ಪ್ರೀತಿಯ ಅಂತಿಮ ಮೂಲವೂ ಗುರಿಯೂ ಆಗಿದ್ದಾನೆಂಬುದನ್ನು ವರ್ಣಿಸಿರುವುದರ ಬಗ್ಗೆ ಚರ್ಚಿಸಲಿದ್ದೇವೆ. “ಶೆಮಾ” ಎಂದು ಕರೆಯಲ್ಪಡುವ ಬೈಬಲ್‌ನಲ್ಲಿರುವ ಪ್ರಾಚೀನ ಪ್ರಾರ್ಥನೆಯ ಆರು ಭಾಗಗಳ ಕುರಿತಾಗಿ ನಾವು ಕಲಿಯುತ್ತಿದ್ದೇವೆ, ಅದರಲ್ಲಿ ಈ ವೀಡಿಯೋ ಪದದ ಅಧ್ಯಯನದ ಕುರಿತಾದ ನಮ್ಮ ಸರಣಿಮಾಲೆಯ ಮೂರನೆಯ ವಿಭಾಗವಾಗಿದೆ. ಈ ಪ್ರಾರ್ಥನೆಯಲ್ಲಿರುವ ಎಲ್ಲಾ ಮುಖ್ಯ ಪದಗಳನ್ನು, ಅವುಗಳ ಮೂಲ ಭಾಷೆಯಲ್ಲಿ ಹಾಗೂ ಐತಿಹಾಸಿಕ ಸನ್ನಿವೇಶದಲ್ಲಿ ಯಾವ ಅರ್ಥವನ್ನು ಕೊಡುತ್ತಿದ್ದವು ಎಂಬುದರ ಕುರಿತು ನಾವು ಕಲಿಯಲಿದ್ದೇವೆ.
#BibleProject #ಸತ್ಯವೇದ #ಅಹವಾ/ಪ್ರೀತಿ