ಮನುಷ್ಯರ ಹೃದಯ ಎಂದರೇನು ಮತ್ತು ಅದು ಏನು ಮಾಡುತ್ತದೆ ಎಂಬುದರ ಕುರಿತಾಗಿ ಬೇರೆ ಬೇರೆ ಸಂಸ್ಕೃತಿಗಳಲ್ಲಿ ಬೇರೆ ಬೇರೆ ಪರಿಕಲ್ಪನೆಗಳಿವೆ, ಬೈಬಲ್ನ ಬರಹಗಾರರು ಇದಕ್ಕೆ ಹೊರತೇನೂ ಅಲ್ಲ. ಈ ವೀಡಿಯೊದಲ್ಲಿ "ಹೃದಯ" ಎಂಬ ಪದಕ್ಕೆ ಬಳಸಿರುವ ಪುರಾತನ ಇಬ್ರಿಯ ಪದಗಳನ್ನು ಮತ್ತು ನಮ್ಮ ಹೃದಯಗಳು ಏನನ್ನು ಪ್ರತಿನಿಧಿಸುತ್ತವೆ ಎಂಬ ಬೇರೆ ಬೇರೆ ವಿಚಾರಗಳನ್ನು ಚರ್ಚಿಸಲಿದ್ದೇವೆ. ಈ ಶ್ರೀಮಂತ ಮತ್ತು ಅದ್ಭುತಕರವಾದ ಪದಕ್ಕಿಂತ ಮಿಗಿಲಾಗಿ ಮನುಷ್ಯರ ಚಿಂತನೆ, ಭಾವನೆ ಮತ್ತು ಬಯಕೆಯ ಸಾರವನ್ನು ಉತ್ತಮವಾಗಿ ವ್ಯಕ್ತಪಡಿಸುವಂಥ ಬೇರೆ ಯಾವ ಪದಗಳು ಬೈಬಲ್ನಲ್ಲಿ ಇಲ್ಲ. “ಶೆಮಾ” ಎಂದು ಕರೆಯಲ್ಪಡುವ ಬೈಬಲ್ನಲ್ಲಿರುವ ಪ್ರಾಚೀನ ಪ್ರಾರ್ಥನೆಯ ಆರು ಭಾಗಗಳ ಕುರಿತಾಗಿ ನಾವು ಕಲಿಯುತ್ತಿದ್ದೇವೆ, ಅದರಲ್ಲಿ ಈ ವೀಡಿಯೋ ಪದದ ಅಧ್ಯಯನದ ಕುರಿತಾದ ನಮ್ಮ ಸರಣಿಮಾಲೆಯ ನಾಲ್ಕನೆಯ ವಿಭಾಗವಾಗಿದೆ. ಈ ಪ್ರಾರ್ಥನೆಯಲ್ಲಿರುವ ಎಲ್ಲಾ ಮುಖ್ಯ ಪದಗಳನ್ನು, ಅವುಗಳ ಮೂಲ ಭಾಷೆಯಲ್ಲಿ ಹಾಗೂ ಐತಿಹಾಸಿಕ ಸನ್ನಿವೇಶದಲ್ಲಿ ಯಾವ ಅರ್ಥವನ್ನು ಕೊಡುತ್ತಿದ್ದವು ಎಂಬುದರ ಕುರಿತು ನಾವು ಕಲಿಯಲಿದ್ದೇವೆ. #BibleProject #ಸತ್ಯವೇದ #ಲೆವ್/ಹೃದಯ
ಲೆವ್/ಹೃದಯ
ಅಚ್ಚುಮೆಚ್ಚಿನವುಗಳಿಗೆ ಕೂಡಿಸು