ಶೆಮಾ ಎಂಬ ಪದದ ಅಧ್ಯಯನ ಸರಣಿಮಾಲೆಯ ಕೊನೆಯ ವಿಭಾಗದಲ್ಲಿ "ಪ್ರಾಣ/ಜೀವಾತ್ಮ" ಎಂದು ಅನುವಾದಿಸಲ್ಪಟ್ಟಿರುವ "ನೆಫೆಶ್" ಎಂಬ ಇಬ್ರಿಯ ಪದವನ್ನು ಕಲಿಯಲಿದ್ದೇವೆ. ಇದಕ್ಕೆ ಬಳಸಿರುವ ಇಂಗ್ಲಿಷ್ ಪದವು ಸಾಮಾನ್ಯವಾಗಿ ಮರಣದ ನಂತರ ಬದುಕುವಂಥ ಭೌತಿಕವಲ್ಲದ ಮನುಷ್ಯನ ಜೀವಾಳವನ್ನು ಸೂಚಿಸುತ್ತದೆ, ಆದರೆ ನೆಫೆಶ್ ಎಂಬ ಪದದ ಅರ್ಥವು ಅದಕ್ಕಿಂತ ವಿಭಿನ್ನವಾದದ್ದಾಗಿದೆ. ಇದು ಮನುಷ್ಯರನ್ನು ಜೀವಿಸುವಂಥ, ಉಸಿರಾಡುವಂಥ, ಭೌತಿಕ ಜೀವಿಗಳಾಗಿ ಅಥವಾ ಜೀವವನ್ನೇ ಸೂಚಿಸುತ್ತದೆ. ಮೋಹಕವಾದ ಈ ಪದಕ್ಕೆ ಬೈಬಲ್ನಲ್ಲಿ ಕೊಡಲಾಗಿರುವ ಅರ್ಥವನ್ನು ಗ್ರಹಿಸಿಕೊಂಡು ಆಶ್ಚರ್ಯಪಡುವಿರಿ!
#BibleProject #ಸತ್ಯವೇದ #ನೆಫೆಶ್/ಜೀವಾತ್ಮ