ಲೆವ್/ಹೃದಯ

ಮನುಷ್ಯರ ಹೃದಯ ಎಂದರೇನು ಮತ್ತು ಅದು ಏನು ಮಾಡುತ್ತದೆ ಎಂಬುದರ ಕುರಿತಾಗಿ ಬೇರೆ ಬೇರೆ ಸಂಸ್ಕೃತಿಗಳಲ್ಲಿ ಬೇರೆ ಬೇರೆ ಪರಿಕಲ್ಪನೆಗಳಿವೆ, ಬೈಬಲ್ನ ಬರಹಗಾರರು ಇದಕ್ಕೆ ಹೊರತೇನೂ ಅಲ್ಲ. ಈ ವೀಡಿಯೊದಲ್ಲಿ "ಹೃದಯ" ಎಂಬ ಪದಕ್ಕೆ ಬಳಸಿರುವ ಪುರಾತನ ಇಬ್ರಿಯ ಪದಗಳನ್ನು ಮತ್ತು ನಮ್ಮ ಹೃದಯಗಳು ಏನನ್ನು ಪ್ರತಿನಿಧಿಸುತ್ತವೆ ಎಂಬ ಬೇರೆ ಬೇರೆ ವಿಚಾರಗಳನ್ನು ಚರ್ಚಿಸಲಿದ್ದೇವೆ. ಈ ಶ್ರೀಮಂತ ಮತ್ತು ಅದ್ಭುತಕರವಾದ ಪದಕ್ಕಿಂತ ಮಿಗಿಲಾಗಿ ಮನುಷ್ಯರ…ಹೆಚ್ಚು ಓದು

ಅಹವಾ/ಪ್ರೀತಿ

ಹಳೆಯ ಒಡಂಬಡಿಕೆಯಲ್ಲಿರುವ ಪ್ರೀತಿಯ ರೀತಿಯ ಕುರಿತು ಮಾತನಾಡೋಣ! ಈ ವೀಡಿಯೊದಲ್ಲಿ ನಾವು ಇಬ್ರಿಯ ಲೇಖಕರು "ಪ್ರೀತಿ" ಎಂಬ ಪದವನ್ನು ಬಳಸಿರುವ ವಿವಿಧ ರೀತಿಗಳ ಬಗ್ಗೆ ಮತ್ತು ಹೇಗೆ ದೇವರೇ ಮನುಷ್ಯರೆಲ್ಲರ ಪ್ರೀತಿಯ ಅಂತಿಮ ಮೂಲವೂ ಗುರಿಯೂ ಆಗಿದ್ದಾನೆಂಬುದನ್ನು ವರ್ಣಿಸಿರುವುದರ ಬಗ್ಗೆ ಚರ್ಚಿಸಲಿದ್ದೇವೆ. “ಶೆಮಾ” ಎಂದು ಕರೆಯಲ್ಪಡುವ ಬೈಬಲ್‌ನಲ್ಲಿರುವ ಪ್ರಾಚೀನ ಪ್ರಾರ್ಥನೆಯ ಆರು ಭಾಗಗಳ ಕುರಿತಾಗಿ ನಾವು ಕಲಿಯುತ್ತಿದ್ದೇವೆ, ಅದರಲ್ಲಿ ಈ ವೀಡಿಯೋ ಪದದ ಅಧ್ಯಯನದ ಕುರಿತಾದ ನಮ್ಮ ಸರಣಿಮಾಲೆಯ ಮೂರನೆಯ ವಿಭಾಗವಾಗಿದೆ. ಈ ಪ್ರಾರ್ಥನೆಯಲ್ಲಿರುವ ಎಲ್ಲಾ ಮುಖ್ಯ ಪದಗಳನ್ನು, ಅವುಗಳ ಮೂಲ ಭಾಷೆಯಲ್ಲಿ ಹಾಗೂ ಐತಿಹಾಸಿಕ ಸನ್ನಿವೇಶದಲ್ಲಿ ಯಾವ ಅರ್ಥವನ್ನು ಕೊಡುತ್ತಿದ್ದವು ಎಂಬುದರ ಕುರಿತು ನಾವು ಕಲಿಯಲಿದ್ದೇವೆ. #BibleProject #ಸತ್ಯವೇದ #ಅಹವಾ/ಪ್ರೀತಿ

ಯಾವೆ/ಕರ್ತನು

ಪದಗಳ ಕುರಿತಾದ ಅಧ್ಯಯನದ ಸರಣಿಮಾಲೆಯ ಎರಡನೆಯ ವಿಭಾಗದಲ್ಲಿ “ಶೆಮಾ” (ಧರ್ಮೋಪದೇಶಕಾಂಡ 6:4-6 ರಲ್ಲಿ ಕಾಣುತ್ತೇವೆ) ಎಂದು ಕರೆಯಲ್ಪಡುವ ಬೈಬಲ್‌ನಲ್ಲಿರುವ ಪ್ರಾಚೀನ ಪ್ರಾರ್ಥನೆಯ ಆರು ಭಾಗಗಳ ಕುರಿತು ಚರ್ಚಿಸಲಿದ್ದೇವೆ. ಸಾವಿರಾರು ವರ್ಷಗಳಿಂದ ಯೆಹೂದ್ಯ ಜನರು ಈ ಮಾತುಗಳನ್ನು ಹೇಳುತ್ತಾ ಪ್ರತಿದಿನ ಪ್ರಾರ್ಥಿಸುತ್ತಿದ್ದಾರೆ, ಇದು ದೇವರಿಗೆ ನಂಬಿಗಸ್ತರು ಭಕ್ತಿವಂತರು ಆಗಿ ಜೀವಿಸುವುದಕ್ಕಿರುವ ಬೈಬಲ್‌ನ ಆಹ್ವಾನವನ್ನು ಸಂಕ್ಷಿಪ್ತವಾಗಿ ಹೇಳುತ್ತದೆ. ಈ ಪ್ರಾರ್ಥನೆಯಲ್ಲಿರುವ ಎಲ್ಲಾ ಮುಖ್ಯ ಪದಗಳನ್ನು, ಅವುಗಳ ಮೂಲ ಭಾಷೆಯಲ್ಲಿ ಹಾಗೂ ಐತಿಹಾಸಿಕ ಸನ್ನಿವೇಶದಲ್ಲಿ ಯಾವ ಅರ್ಥವನ್ನು ಕೊಡುತ್ತಿದ್ದವು ಎಂಬುದರ ಕುರಿತು ನಾವು ಕಲಿಯಲಿದ್ದೇವೆ. #BibleProject #ಸತ್ಯವೇದ #ಯಾವೆ/ಕರ್ತನು

ಶೆಮಾ/ಕೇಳಿರಿ

ಪದಗಳ ಕುರಿತಾದ ನಮ್ಮ ಹೊಸ ಅಧ್ಯಯನದ ಸರಣಿಮಾಲೆಯ ಮೊದಲನೆಯ ವಿಭಾಗದಲ್ಲಿ “ಶೆಮಾ” (ಧರ್ಮೋಪದೇಶಕಾಂಡ 6:4-6 ರಲ್ಲಿ ಕಾಣುತ್ತೇವೆ) ಎಂದು ಕರೆಯಲ್ಪಡುವ ಬೈಬಲ್‌ನಲ್ಲಿರುವ ಪ್ರಾಚೀನ ಪ್ರಾರ್ಥನೆಯ ಆರು ಭಾಗಗಳ ಕುರಿತು ಚರ್ಚಿಸಲಿದ್ದೇವೆ. ಸಾವಿರಾರು ವರ್ಷಗಳಿಂದ ಯೆಹೂದ್ಯ ಜನರು ಈ ಮಾತುಗಳನ್ನು ಹೇಳುತ್ತಾ ಪ್ರತಿದಿನ ಪ್ರಾರ್ಥಿಸುತ್ತಿದ್ದರು, ಇದು ದೇವರಿಗೆ ನಂಬಿಗಸ್ತರು ಭಕ್ತಿವಂತರು ಆಗಿ ಜೀವಿಸುವುದಕ್ಕಿರುವ ಬೈಬಲ್‌ನ ಆಹ್ವಾನವನ್ನು ಸಂಕ್ಷಿಪ್ತವಾಗಿ ಹೇಳುತ್ತದೆ. ಈ ಪ್ರಾರ್ಥನೆಯಲ್ಲಿರುವ ಎಲ್ಲಾ ಮುಖ್ಯ ಪದಗಳನ್ನು, ಅವುಗಳ ಮೂಲ ಭಾಷೆಯಲ್ಲಿ ಹಾಗೂ ಐತಿಹಾಸಿಕ ಸನ್ನಿವೇಶದಲ್ಲಿ ಯಾವ ಅರ್ಥವನ್ನು ಕೊಡುತ್ತಿದ್ದವು ಎಂಬುದರ ಕುರಿತು ನಾವು ಕಲಿಯಲಿದ್ದೇವೆ. #BibleProject #ಸತ್ಯವೇದ #ಶೆಮಾ/ಕೇಳಿರಿ

ಸಾರಾಂಶ: ಯೆಹೆಜ್ಕೇಲ

ಯೆಹೆಜ್ಕೇಲ 1-33 ಅಧ್ಯಾಯಗಳ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಇಸ್ರಾಯೇಲು ಈ ನ್ಯಾಯತೀರ್ಪಿಗೆ ಅರ್ಹವಾಗಿದ್ದೆ ಮತ್ತು ದೇವರ ನ್ಯಾಯವು ಭವಿಷ್ಯತ್ತಿನ ನಿರೀಕ್ಷೆಯನ್ನು ಹುಟ್ಟಿಸುತ್ತದೆ ಎಂಬುದನ್ನು ಬಾಬಿಲೋನಿನ ಸೆರೆವಾಸದಲ್ಲಿ ಯೆಹೆಜ್ಕೇಲನ ಪುಸ್ತಕವು ತೋರಿಸಿಕೊಡುತ್ತದೆ. #BibleProject #ಸತ್ಯವೇದ #ಯೆಹೆಜ್ಕೇಲ

ಸಾರಾಂಶ: ಯೆಹೆಜ್ಕೇಲ

ಯೆಹೆಜ್ಕೇಲ 1-33 ಅಧ್ಯಾಯಗಳ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಇಸ್ರಾಯೇಲು ಈ ನ್ಯಾಯತೀರ್ಪಿಗೆ ಅರ್ಹವಾಗಿದ್ದೆ ಮತ್ತು ದೇವರ ನ್ಯಾಯವು ಭವಿಷ್ಯತ್ತಿನ ನಿರೀಕ್ಷೆಯನ್ನು ಹುಟ್ಟಿಸುತ್ತದೆ ಎಂಬುದನ್ನು ಬಾಬಿಲೋನಿನ ಸೆರೆವಾಸದಲ್ಲಿ ಯೆಹೆಜ್ಕೇಲನ ಪುಸ್ತಕವು ತೋರಿಸಿಕೊಡುತ್ತದೆ. #BibleProject #ಸತ್ಯವೇದ #ಯೆಹೆಜ್ಕೇಲ

ಕರ್ತನ ದಿನ

ಮನುಷ್ಯನ ದುಷ್ಟತನವನ್ನು ಮತ್ತು ಅದಕ್ಕೆ ಕಾರಣವಾಗಿರುವ ನಿಗೂಢವಾದ ಆತ್ಮಿಕ ದುಷ್ಟಶಕ್ತಿಯನ್ನು ಎದುರಿಸುವ ಕಾರ್ಯವನ್ನು ದೇವರು ಹೇಗೆ ಮಾಡುತ್ತಿದ್ದಾನೆ ಎಂಬುದನ್ನು ಕರ್ತನ ದಿನವು ವಿವರಿಸುತ್ತದೆ. #BibleProject #ಸತ್ಯವೇದ #ಕರ್ತನದಿನ

ನ್ಯಾಯ

ನ್ಯಾಯ ಎಂದರೇನು ಮತ್ತು ಯಾರು ಅದನ್ನು ವಿವರಿಸುವರು? ಬೈಬಲಿನಲ್ಲಿರುವ ನ್ಯಾಯ ಎಂಬ ವಿಷಯವನ್ನು ಪರಿಶೋಧಿಸಿ, ಅದು ಯೇಸುವಿನ ಕಡೆಗೆ ನಡೆಸುವಂಥ ಬೈಬಲಿನಲ್ಲಿರುವ ಕಥೆಯಲ್ಲಿ ಹೇಗೆ ಆಳವಾಗಿ ಬೇರೂರಿದೆ ಎಂಬುದನ್ನು ಕಲಿತುಕೊಳ್ಳುತ್ತೇವೆ. #BibleProject #ಸತ್ಯವೇದ #ನ್ಯಾಯ

ದಾನಶೀಲತೆ

ಬೈಬಲಿನ ಕಥೆಯಲ್ಲಿ ದೇವರನ್ನು ತನ್ನ ಅತಿಥಿಗಳ ಅಗತ್ಯಗಳನ್ನು ಒದಗಿಸುವಂತಹ ದಾನಶೀಲನಾದ ಆತಿಥ್ಯಕಾರನಾಗಿ ವರ್ಣಿಸಲಾಗಿದೆ. ಆದರೆ ಮನುಷ್ಯರು ಕೊರತೆಯ ಮನೋಭಾವದಿಂದ ಬದುಕುತ್ತಾರೆ ಮತ್ತು ದೇವರ ಅನೇಕ ದಾನಗಳನ್ನು ಕೂಡಿಟ್ಟಿಕೊಳ್ಳುತ್ತಾರೆ. ಈ ವೀಡಿಯೊದಲ್ಲಿ, ಯೇಸು ಎಂಬ ವ್ಯಕ್ತಿಯಲ್ಲಿ ದೇವರು ತನ್ನನ್ನೇ ತಾನು ಸರ್ವೋತ್ಕೃಷ್ಟ ದಾನವಾಗಿ ಕೊಡುವ ಮೂಲಕ ನಮ್ಮ ಸ್ವಾರ್ಥವನ್ನು ಜಯಿಸಲು ದೇವರು ಮಾಡಿರುವ ಸಂಕಲ್ಪದ ಕುರಿತಾಗಿ ನಾವು ಕಲಿಯುತ್ತೇವೆ. #BibleProject #ಸತ್ಯವೇದ #ದಾನಶೀಲತೆ

ಬೈಬಲ್ ಪ್ರಾಜೆಕ್ಟು ಎಂದರೇನು?

#BibleProject #ಸತ್ಯವೇದ #ಬೈಬಲ್ಪ್ರಾಜೆಕ್ಟುಎಂದರೇನು?

ಯಜ್ಞ ಮತ್ತು ಪ್ರಾಯಶ್ಚಿತ್ತ

ಪ್ರಾಣಿಗಳನ್ನು ಯಜ್ಞವಾಗಿ ಅರ್ಪಿಸುವುದರ ಮೂಲಕ ದೇವರ “ಹೊದಿಕೆಯು” ಮನುಷ್ಯರ ದುಷ್ಟತನವನ್ನು ಮರೆಮಾಡುತ್ತಿತ್ತು, ಇದು ಯೇಸುವನ್ನೂ ಆತನ ಮರಣ ಮತ್ತು ಪುನರುತ್ಥಾನವನ್ನೂ ಸೂಚಿಸುತ್ತದೆ. #BibleProject #ಸತ್ಯವೇದ #ಯಜ್ಞಮತ್ತುಪ್ರಾಯಶ್ಚಿತ್ತ