ಆತ್ಮೀಕ ಜೀವಿಗಳ ಪೀಠಿಕೆ
ಮಿಯೋಡ್/ಬಲ
"ನಿಮ್ಮ ಪೂರ್ಣ ಶಕ್ತಿಯಿಂದ" ದೇವರನ್ನು ಪ್ರೀತಿಸುವುದು ಎಂದರೇನು? ಶೆಮಾದ ಕುರಿತಾದ ನಮ್ಮ ವೀಡಿಯೊಗಳ ಈ ಕೊನೆಯ ವಿಭಾಗದಲ್ಲಿ, ಈ ಪದಗುಚ್ಛದಲ್ಲಿ ಅಡಕವಾಗಿರುವ ಇಬ್ರಿಯ ಪದವನ್ನು ನಾವು ಕಲಿಯುತ್ತೇವೆ. ಗಮನ ಕೊಡಬೇಕಾದ ಸಂಗತಿ: ಈ ಶ್ರೀಮಂತ ಪದವನ್ನು ಭಾಷಾಂತರ ಮಾಡುವ ಅನೇಕ ರೀತಿಗಳಲ್ಲಿ "ಶಕ್ತಿ" ಎಂಬುದು ಕೂಡ ಒಂದು ರೀತಿಯಾಗಿದ್ದಿಯಷ್ಟೆ! #BibleProject #ಸತ್ಯವೇದ #ಮಿಯೋಡ್/ಬಲ
ನೆಫೆಶ್/ಜೀವಾತ್ಮ
ಶೆಮಾ ಎಂಬ ಪದದ ಅಧ್ಯಯನ ಸರಣಿಮಾಲೆಯ ಕೊನೆಯ ವಿಭಾಗದಲ್ಲಿ "ಪ್ರಾಣ/ಜೀವಾತ್ಮ" ಎಂದು ಅನುವಾದಿಸಲ್ಪಟ್ಟಿರುವ "ನೆಫೆಶ್" ಎಂಬ ಇಬ್ರಿಯ ಪದವನ್ನು ಕಲಿಯಲಿದ್ದೇವೆ. ಇದಕ್ಕೆ ಬಳಸಿರುವ ಇಂಗ್ಲಿಷ್ ಪದವು ಸಾಮಾನ್ಯವಾಗಿ ಮರಣದ ನಂತರ ಬದುಕುವಂಥ ಭೌತಿಕವಲ್ಲದ ಮನುಷ್ಯನ ಜೀವಾಳವನ್ನು ಸೂಚಿಸುತ್ತದೆ, ಆದರೆ ನೆಫೆಶ್ ಎಂಬ ಪದದ ಅರ್ಥವು ಅದಕ್ಕಿಂತ ವಿಭಿನ್ನವಾದದ್ದಾಗಿದೆ. ಇದು ಮನುಷ್ಯರನ್ನು ಜೀವಿಸುವಂಥ, ಉಸಿರಾಡುವಂಥ, ಭೌತಿಕ ಜೀವಿಗಳಾಗಿ ಅಥವಾ ಜೀವವನ್ನೇ ಸೂಚಿಸುತ್ತದೆ. ಮೋಹಕವಾದ ಈ ಪದಕ್ಕೆ ಬೈಬಲ್ನಲ್ಲಿ ಕೊಡಲಾಗಿರುವ ಅರ್ಥವನ್ನು ಗ್ರಹಿಸಿಕೊಂಡು ಆಶ್ಚರ್ಯಪಡುವಿರಿ! #BibleProject #ಸತ್ಯವೇದ #ನೆಫೆಶ್/ಜೀವಾತ್ಮ
ಲೆವ್/ಹೃದಯ
ಮನುಷ್ಯರ ಹೃದಯ ಎಂದರೇನು ಮತ್ತು ಅದು ಏನು ಮಾಡುತ್ತದೆ ಎಂಬುದರ ಕುರಿತಾಗಿ ಬೇರೆ ಬೇರೆ ಸಂಸ್ಕೃತಿಗಳಲ್ಲಿ ಬೇರೆ ಬೇರೆ ಪರಿಕಲ್ಪನೆಗಳಿವೆ, ಬೈಬಲ್ನ ಬರಹಗಾರರು ಇದಕ್ಕೆ ಹೊರತೇನೂ ಅಲ್ಲ. ಈ ವೀಡಿಯೊದಲ್ಲಿ "ಹೃದಯ" ಎಂಬ ಪದಕ್ಕೆ ಬಳಸಿರುವ ಪುರಾತನ ಇಬ್ರಿಯ ಪದಗಳನ್ನು ಮತ್ತು ನಮ್ಮ ಹೃದಯಗಳು ಏನನ್ನು ಪ್ರತಿನಿಧಿಸುತ್ತವೆ ಎಂಬ ಬೇರೆ ಬೇರೆ ವಿಚಾರಗಳನ್ನು ಚರ್ಚಿಸಲಿದ್ದೇವೆ. ಈ ಶ್ರೀಮಂತ ಮತ್ತು ಅದ್ಭುತಕರವಾದ ಪದಕ್ಕಿಂತ ಮಿಗಿಲಾಗಿ ಮನುಷ್ಯರ ಚಿಂತನೆ, ಭಾವನೆ ಮತ್ತು ಬಯಕೆಯ ಸಾರವನ್ನು ಉತ್ತಮವಾಗಿ ವ್ಯಕ್ತಪಡಿಸುವಂಥ ಬೇರೆ ಯಾವ ಪದಗಳು ಬೈಬಲ್ನಲ್ಲಿ ಇಲ್ಲ. “ಶೆಮಾ” ಎಂದು ಕರೆಯಲ್ಪಡುವ ಬೈಬಲ್ನಲ್ಲಿರುವ ಪ್ರಾಚೀನ ಪ್ರಾರ್ಥನೆಯ ಆರು ಭಾಗಗಳ ಕುರಿತಾಗಿ ನಾವು ಕಲಿಯುತ್ತಿದ್ದೇವೆ, ಅದರಲ್ಲಿ ಈ ವೀಡಿಯೋ ಪದದ ಅಧ್ಯಯನದ ಕುರಿತಾದ ನಮ್ಮ ಸರಣಿಮಾಲೆಯ ನಾಲ್ಕನೆಯ ವಿಭಾಗವಾಗಿದೆ. ಈ ಪ್ರಾರ್ಥನೆಯಲ್ಲಿರುವ ಎಲ್ಲಾ ಮುಖ್ಯ ಪದಗಳನ್ನು, ಅವುಗಳ ಮೂಲ ಭಾಷೆಯಲ್ಲಿ ಹಾಗೂ ಐತಿಹಾಸಿಕ ಸನ್ನಿವೇಶದಲ್ಲಿ ಯಾವ ಅರ್ಥವನ್ನು ಕೊಡುತ್ತಿದ್ದವು ಎಂಬುದರ ಕುರಿತು ನಾವು ಕಲಿಯಲಿದ್ದೇವೆ. #BibleProject #ಸತ್ಯವೇದ #ಲೆವ್/ಹೃದಯ
ಅಹವಾ/ಪ್ರೀತಿ
ಹಳೆಯ ಒಡಂಬಡಿಕೆಯಲ್ಲಿರುವ ಪ್ರೀತಿಯ ರೀತಿಯ ಕುರಿತು ಮಾತನಾಡೋಣ! ಈ ವೀಡಿಯೊದಲ್ಲಿ ನಾವು ಇಬ್ರಿಯ ಲೇಖಕರು "ಪ್ರೀತಿ" ಎಂಬ ಪದವನ್ನು ಬಳಸಿರುವ ವಿವಿಧ ರೀತಿಗಳ ಬಗ್ಗೆ ಮತ್ತು ಹೇಗೆ ದೇವರೇ ಮನುಷ್ಯರೆಲ್ಲರ ಪ್ರೀತಿಯ ಅಂತಿಮ ಮೂಲವೂ ಗುರಿಯೂ ಆಗಿದ್ದಾನೆಂಬುದನ್ನು ವರ್ಣಿಸಿರುವುದರ ಬಗ್ಗೆ ಚರ್ಚಿಸಲಿದ್ದೇವೆ. “ಶೆಮಾ” ಎಂದು ಕರೆಯಲ್ಪಡುವ ಬೈಬಲ್ನಲ್ಲಿರುವ ಪ್ರಾಚೀನ ಪ್ರಾರ್ಥನೆಯ ಆರು ಭಾಗಗಳ ಕುರಿತಾಗಿ ನಾವು ಕಲಿಯುತ್ತಿದ್ದೇವೆ, ಅದರಲ್ಲಿ ಈ ವೀಡಿಯೋ ಪದದ ಅಧ್ಯಯನದ ಕುರಿತಾದ ನಮ್ಮ ಸರಣಿಮಾಲೆಯ ಮೂರನೆಯ ವಿಭಾಗವಾಗಿದೆ. ಈ ಪ್ರಾರ್ಥನೆಯಲ್ಲಿರುವ ಎಲ್ಲಾ ಮುಖ್ಯ ಪದಗಳನ್ನು, ಅವುಗಳ ಮೂಲ ಭಾಷೆಯಲ್ಲಿ ಹಾಗೂ ಐತಿಹಾಸಿಕ ಸನ್ನಿವೇಶದಲ್ಲಿ ಯಾವ ಅರ್ಥವನ್ನು ಕೊಡುತ್ತಿದ್ದವು ಎಂಬುದರ ಕುರಿತು ನಾವು ಕಲಿಯಲಿದ್ದೇವೆ. #BibleProject #ಸತ್ಯವೇದ #ಅಹವಾ/ಪ್ರೀತಿ
ಯಾವೆ/ಕರ್ತನು
ಪದಗಳ ಕುರಿತಾದ ಅಧ್ಯಯನದ ಸರಣಿಮಾಲೆಯ ಎರಡನೆಯ ವಿಭಾಗದಲ್ಲಿ “ಶೆಮಾ” (ಧರ್ಮೋಪದೇಶಕಾಂಡ 6:4-6 ರಲ್ಲಿ ಕಾಣುತ್ತೇವೆ) ಎಂದು ಕರೆಯಲ್ಪಡುವ ಬೈಬಲ್ನಲ್ಲಿರುವ ಪ್ರಾಚೀನ ಪ್ರಾರ್ಥನೆಯ ಆರು ಭಾಗಗಳ ಕುರಿತು ಚರ್ಚಿಸಲಿದ್ದೇವೆ. ಸಾವಿರಾರು ವರ್ಷಗಳಿಂದ ಯೆಹೂದ್ಯ ಜನರು ಈ ಮಾತುಗಳನ್ನು ಹೇಳುತ್ತಾ ಪ್ರತಿದಿನ ಪ್ರಾರ್ಥಿಸುತ್ತಿದ್ದಾರೆ, ಇದು ದೇವರಿಗೆ ನಂಬಿಗಸ್ತರು ಭಕ್ತಿವಂತರು ಆಗಿ ಜೀವಿಸುವುದಕ್ಕಿರುವ ಬೈಬಲ್ನ ಆಹ್ವಾನವನ್ನು ಸಂಕ್ಷಿಪ್ತವಾಗಿ ಹೇಳುತ್ತದೆ. ಈ ಪ್ರಾರ್ಥನೆಯಲ್ಲಿರುವ ಎಲ್ಲಾ ಮುಖ್ಯ ಪದಗಳನ್ನು, ಅವುಗಳ ಮೂಲ ಭಾಷೆಯಲ್ಲಿ ಹಾಗೂ ಐತಿಹಾಸಿಕ ಸನ್ನಿವೇಶದಲ್ಲಿ ಯಾವ ಅರ್ಥವನ್ನು ಕೊಡುತ್ತಿದ್ದವು ಎಂಬುದರ ಕುರಿತು ನಾವು ಕಲಿಯಲಿದ್ದೇವೆ. #BibleProject #ಸತ್ಯವೇದ #ಯಾವೆ/ಕರ್ತನು
ಶೆಮಾ/ಕೇಳಿರಿ
ಪದಗಳ ಕುರಿತಾದ ನಮ್ಮ ಹೊಸ ಅಧ್ಯಯನದ ಸರಣಿಮಾಲೆಯ ಮೊದಲನೆಯ ವಿಭಾಗದಲ್ಲಿ “ಶೆಮಾ” (ಧರ್ಮೋಪದೇಶಕಾಂಡ 6:4-6 ರಲ್ಲಿ ಕಾಣುತ್ತೇವೆ) ಎಂದು ಕರೆಯಲ್ಪಡುವ ಬೈಬಲ್ನಲ್ಲಿರುವ ಪ್ರಾಚೀನ ಪ್ರಾರ್ಥನೆಯ ಆರು ಭಾಗಗಳ ಕುರಿತು ಚರ್ಚಿಸಲಿದ್ದೇವೆ. ಸಾವಿರಾರು ವರ್ಷಗಳಿಂದ ಯೆಹೂದ್ಯ ಜನರು ಈ ಮಾತುಗಳನ್ನು ಹೇಳುತ್ತಾ ಪ್ರತಿದಿನ ಪ್ರಾರ್ಥಿಸುತ್ತಿದ್ದರು, ಇದು ದೇವರಿಗೆ ನಂಬಿಗಸ್ತರು ಭಕ್ತಿವಂತರು ಆಗಿ ಜೀವಿಸುವುದಕ್ಕಿರುವ ಬೈಬಲ್ನ ಆಹ್ವಾನವನ್ನು ಸಂಕ್ಷಿಪ್ತವಾಗಿ ಹೇಳುತ್ತದೆ. ಈ ಪ್ರಾರ್ಥನೆಯಲ್ಲಿರುವ ಎಲ್ಲಾ ಮುಖ್ಯ ಪದಗಳನ್ನು, ಅವುಗಳ ಮೂಲ ಭಾಷೆಯಲ್ಲಿ ಹಾಗೂ ಐತಿಹಾಸಿಕ ಸನ್ನಿವೇಶದಲ್ಲಿ ಯಾವ ಅರ್ಥವನ್ನು ಕೊಡುತ್ತಿದ್ದವು ಎಂಬುದರ ಕುರಿತು ನಾವು ಕಲಿಯಲಿದ್ದೇವೆ. #BibleProject #ಸತ್ಯವೇದ #ಶೆಮಾ/ಕೇಳಿರಿ
ಸಾರಾಂಶ: ಯೆಹೆಜ್ಕೇಲ
ಯೆಹೆಜ್ಕೇಲ 1-33 ಅಧ್ಯಾಯಗಳ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಇಸ್ರಾಯೇಲು ಈ ನ್ಯಾಯತೀರ್ಪಿಗೆ ಅರ್ಹವಾಗಿದ್ದೆ ಮತ್ತು ದೇವರ ನ್ಯಾಯವು ಭವಿಷ್ಯತ್ತಿನ ನಿರೀಕ್ಷೆಯನ್ನು ಹುಟ್ಟಿಸುತ್ತದೆ ಎಂಬುದನ್ನು ಬಾಬಿಲೋನಿನ ಸೆರೆವಾಸದಲ್ಲಿ ಯೆಹೆಜ್ಕೇಲನ ಪುಸ್ತಕವು ತೋರಿಸಿಕೊಡುತ್ತದೆ. #BibleProject #ಸತ್ಯವೇದ #ಯೆಹೆಜ್ಕೇಲ
ಸಾರಾಂಶ: ಯೆಹೆಜ್ಕೇಲ
ಯೆಹೆಜ್ಕೇಲ 1-33 ಅಧ್ಯಾಯಗಳ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಇಸ್ರಾಯೇಲು ಈ ನ್ಯಾಯತೀರ್ಪಿಗೆ ಅರ್ಹವಾಗಿದ್ದೆ ಮತ್ತು ದೇವರ ನ್ಯಾಯವು ಭವಿಷ್ಯತ್ತಿನ ನಿರೀಕ್ಷೆಯನ್ನು ಹುಟ್ಟಿಸುತ್ತದೆ ಎಂಬುದನ್ನು ಬಾಬಿಲೋನಿನ ಸೆರೆವಾಸದಲ್ಲಿ ಯೆಹೆಜ್ಕೇಲನ ಪುಸ್ತಕವು ತೋರಿಸಿಕೊಡುತ್ತದೆ. #BibleProject #ಸತ್ಯವೇದ #ಯೆಹೆಜ್ಕೇಲ
ಕರ್ತನ ದಿನ
ಮನುಷ್ಯನ ದುಷ್ಟತನವನ್ನು ಮತ್ತು ಅದಕ್ಕೆ ಕಾರಣವಾಗಿರುವ ನಿಗೂಢವಾದ ಆತ್ಮಿಕ ದುಷ್ಟಶಕ್ತಿಯನ್ನು ಎದುರಿಸುವ ಕಾರ್ಯವನ್ನು ದೇವರು ಹೇಗೆ ಮಾಡುತ್ತಿದ್ದಾನೆ ಎಂಬುದನ್ನು ಕರ್ತನ ದಿನವು ವಿವರಿಸುತ್ತದೆ. #BibleProject #ಸತ್ಯವೇದ #ಕರ್ತನದಿನ
ನ್ಯಾಯ
ನ್ಯಾಯ ಎಂದರೇನು ಮತ್ತು ಯಾರು ಅದನ್ನು ವಿವರಿಸುವರು? ಬೈಬಲಿನಲ್ಲಿರುವ ನ್ಯಾಯ ಎಂಬ ವಿಷಯವನ್ನು ಪರಿಶೋಧಿಸಿ, ಅದು ಯೇಸುವಿನ ಕಡೆಗೆ ನಡೆಸುವಂಥ ಬೈಬಲಿನಲ್ಲಿರುವ ಕಥೆಯಲ್ಲಿ ಹೇಗೆ ಆಳವಾಗಿ ಬೇರೂರಿದೆ ಎಂಬುದನ್ನು ಕಲಿತುಕೊಳ್ಳುತ್ತೇವೆ. #BibleProject #ಸತ್ಯವೇದ #ನ್ಯಾಯ